ಋಕ್
	
ದೇವತೆಗಳ ಸ್ತುತಿರೂಪವಾದ ಒಂದು ವೈದಿಕಮಂತ್ರ; ಛಂದೋಬದ್ಧವಾಗಿರುತ್ತದೆ. ಒಂದು ನಿರ್ದಿಷ್ಟಕ್ರಮದಲ್ಲಿ ಜೋಡಿಸಿರುವ ಇಂಥ ಮಂತ್ರಗಳ ಸಮುದಾಯ ಋಗ್ವೇದವೆನಿಸಿಕೊಂಡಿದೆ. ದೇವತಾಪ್ರಶಂಸೆ ಪ್ರಾರ್ಥನೆಗಳನ್ನೊಳಗೊಂಡಿರುವ ಈ ಮಂತ್ರಗಳು ಕೇವಲ ವಿಹಿತಕರ್ಮವನ್ನನುಸರಿಸಿ ಬಂದ ಸಾಮ ಯಜಸ್ಸುಗಳಿಂದ ಬೇರೆಯಾಗಿವೆ. 		(ನೋಡಿ- ಋಗ್ವೇದ)

(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ